ರೇಡಾನ್
ಆವರ್ತಕೋಷ್ಟಕದ ಜಡಾನಿಲಗಳ ಅಥವಾ ಶ್ರೇಷ್ಠಾನಿಲ ಗಳ ಗುಂಪಿನ 6ನೆಯ ಆವರ್ತದ ವಿಕಿರಣಪಟು ಅನಿಲಧಾತು.  ಪ್ರತೀಕ Rn. ಅತ್ಯಂತ ಭಾರವಾದ ನಿರ್ವರ್ಣ ಅನಿಲ. ಪರಮಾಣು ಸಂಖ್ಯೆ 86. ಪರಮಾಣು ತೂಕ 222. ದ್ರವನಬಿಂದು -710 ಸೆ. ಕುದಿಬಿಂದು -61.70 ಸೆ. ಸಾಪೇಕ್ಷ ಸಾಂದ್ರತೆ 9.73. ಎಲೆಕ್ಟ್ರಾನ್ ವಿನ್ಯಾಸ 1s2 2s2 2ಠಿ6 3s2 3ಠಿ6 3ಜ10 4s2 4ಠಿ6 4ಜ10 4ಜಿ14 5s2 5ಠಿ6 5ಜ10 6s2 6ಠಿ6. ಇಪ್ಪತ್ತು ಸಮಸ್ಥಾನಿಗಳ ಪೈಕಿ 3 ಮಾತ್ರ ನಿಸರ್ಗದಲ್ಲಿ ಲಭ್ಯ. ಅತ್ಯಂತ ದೀರ್ಘಾಯು ಸಮಸ್ಥಾನಿ ರೇಡಾನ್-226 (ಅರ್ಧಾಯು 3.8 ದಿನ). ರೇಡಿಯಮ್-226ರ ಚಿ-ಕ್ಷಯದಿಂದ ಇದರ ವ್ಯುತ್ಪನ್ನ. ಎಂದೇ ಇದನ್ನು ಮೊದಲು ರೇಡಿಯಮ್ ಪ್ರಸರ್ಜನ (ಎಮನೇಶನ್) ಎಂದು ಕರೆಯುತ್ತಿದ್ದರು.

ಜರ್ಮನ್ ರಸಾಯನ ವಿಜ್ಞಾನಿ ಫ್ರೆಡ್ರಿಕ್ ಅರ್ನ್‍ಸ್ಟ್ ಡಾರ್ನ್ (1848-1916) ಎಂಬಾತ ಈ ಅನಿಲ ಧಾತು ವನ್ನು 1900ರಲ್ಲಿ ಆವಿಷ್ಕರಿ ಸಿದ. ಜಡಾನಿಲ ಎಂದು ಪರಿಗಣಿಸಲಾಗಿದ್ದ ರೇಡಾನ್ ಫ್ಲೂರೀನ್‍ನೊಂದಿಗೆ ಸಂಯು ಕ್ತಗಳನ್ನು ರೂಪಿಸುವ ಸಂಗತಿ ಪತ್ತೆಯಾದದ್ದು 1962ರಲ್ಲಿ. ಯುರೇನಿಯಮ್ ಖನಿಜ ಕ್ಷಯದಿಂದ ವ್ಯುತ್ಪತ್ತಿಯಾಗುವ ರೇಡಾನ್ ಶಿಲೆಗಳಲ್ಲಿ ಮತ್ತು ಮಣ್ಣಿನಲ್ಲಿ ಅಲ್ಪ ಪ್ರಮಾಣದಲ್ಲಿ ಲಭ್ಯ.  ಎಂದೇ, ಇದು ಬಹುತೇಕ ಪ್ರಸಾಮಾನ್ಯ ಹಿನ್ನೆಲೆ ವಿಕಿರಣದ ಮೂಲ. 

ರೇಡಾನ್ ಅನಿಲ ಸಂಚಯ ದಟ್ಟವಾಗಿದ್ದರೆ ಆರೋಗ್ಯಕ್ಕೆ ಧಕ್ಕೆ ಉಂಟಾಗುತ್ತದೆ. ಕ್ಯಾನ್ಸರ್ ರೋಗ ಚಿಕಿತ್ಸೆಯಲ್ಲಿ ಬಳಸುವುದುಂಟು.
	(ಎಚ್.ಜಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ